ಹಲೋ ಸ್ನೇಹಿತರೇ, ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ಹೊಸ ರೂಲ್ಸ್ ಅನ್ನು ಜಾರಿಮಾಡಿದ್ದು, ಇನ್ಮುಂದೆ ಶಾಲೆಯ ಶಿಕ್ಷಕರು ನಿಗದಿತ ಅವಧಿಗಿಂತ ಅರ್ಧ ಗಂಟೆ ಮೊದಲೇ ಶಾಲೆಗೆ ಹಾಜರಾಗಬೇಕೆಂದು ಆದೇಶ ಹೊರಡಿಸಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಪಠ್ಯ ಬೋಧನೆ ಹಾಗೂ ಮಕ್ಕಳ ಕಲಿಕಾ ಗುಣಮಟ್ಟ ಬಲವರ್ಧನೆಗೊಳಿಸುವ ಸಲುವಾಗಿ ಶಿಕ್ಷಕರು ನಿಗದಿ ಪಡಿಸಿದ ಅವಧಿಗಿಂತ ಅರ್ಧ ಗಂಟೆ ಮೊದಲೇ ಶಾಲೆಗೆ ಹಾಜರಾಗಿ ಅಗತ್ಯ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಲೇಬೇಕು ಎಂದು ಶಿಕ್ಷಣ ಇಲಾಖೆಯು ಸೂಚಿಸಿದೆ.
ಅಂದಹಾಗೆ ಮಕ್ಕಳ ಶೈಕ್ಷಣಿಕ ಮತ್ತು ಬೌದ್ಧಿಕ ಹಾಗೂ ಸಾಮಾಜಿಕ ಬೆಳೆವಣಿಗೆಯ ದೃಷ್ಟಿಯಿಂದ ಶಿಕ್ಷಕರುತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಲೇಬೇಕು.
ಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್! BPNL ನಲ್ಲಿ 1125+ ಖಾಲಿ ಹುದ್ದೆಗಳ ಭರ್ತಿ
ಪ್ರತಿ ಶಾಲೆಯಲ್ಲಿನ ಮುಖ್ಯ ಶಿಕ್ಷಕರು ಹಾಗೂ ಇತರೆ ಸಹ ಶಿಕ್ಷಕರು ನಿಗದಿತ ಸಮಯಕ್ಕೆ ಅರ್ಧಗಂಟೆ ಮೊದಲೇ ಕರ್ತವ್ಯಕ್ಕೆ ಹಾಜರಾಗಿ ಇಲಾಖೆಯ ಮಾರ್ಗ ಸೂಚಿಗಳನ್ನು ಅನುಸರಿಸಲೇಬೇಕು ಎಂದು ಸೂಚಿಸಿದ್ದಾರೆ.
ಇಷ್ಟೇ ಅಲ್ಲದೆ ರಜೆಯ ಮೇಲೆ ತೆರಳುವಾಗ, ಶಾಲೆಗೆ ಹಾಜರಾಗಿದ್ದ ವೇಳೆ ಅನ್ಯ ಕಾರ್ಯನಿಮಿತ್ತ ಹೊರೆಗೆ ಹೋಗುವುದಾದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪೂರ್ವಾನುಮತಿಯನ್ನು ಪಡೆದಿರಬೇಕು. ಶಿಕ್ಷಕರು ಶಾಲಾ ಅವಧಿಯಲ್ಲಿ ಬಿಇಒ ಮತ್ತು ಡಿಡಿಪಿಐ ಕಚೇರಿಗಳಿಗೆ ತೆರಳುವುದನ್ನು ಕಡ್ಡಾಯವಾಗಿ ನಿಯಂತ್ರಿಸಲೇಬೇಕು ಎಂದು ಇಲಾಖೆ ಆಯುಕ್ತ ಬಿ.ಬಿ.ಕಾವೇರಿ ಸುತ್ತೋಲೆ ಯನ್ನು ಹೊರಡಿಸಿದ್ದಾರೆ.
ಇತರೆ ವಿಷಯಗಳು
ವರ್ಷಗಳ ಬಳಿಕ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಇಳಿಕೆ ! ಹೊಸ ಬೆಲೆಯ ಪಟ್ಟಿಯನ್ನು ಇಲ್ಲೇ ಚೆಕ್ ಮಾಡಿ
ಎಲ್ಐಸಿ ನೌಕರರಿಗೆ ಸಂತಸದ ಸುದ್ದಿ.!! ಅಂತೂ ಹೆಚ್ಚಾಯ್ತು ಶೇ.17ರಷ್ಟು ವೇತನ