ಮದ್ಯಪ್ರಿಯರಿಗೆ ಮತ್ತೊಮ್ಮೆ ಬೆಲೆ ಏರಿಕೆ ಬರೆ ಬಿದ್ದಿದೆ. ಕಳೆದ ತಿಂಗಳಷ್ಟೇ ಬಿಯರಿನ ಬೆಲೆ ಏರಿಕೆಯನ್ನು ಮಾಡಲಾಗಿತ್ತು. ಈಗ ಮತ್ತೆ ಬೆಲೆ ಏರಿಕೆ ಮಾಡಿದ್ದು, ಒಂದೂವರೆ ವರ್ಷದಲ್ಲಿ 5ನೇ ಬಾರಿಗೆ ಬಿಯರ್ ಬೆಲೆ ಹೆಚ್ಚಳವಾಗಿದೆ.
ಪ್ರತಿ ಬಾಟಲ್ ನ ಬೆಲೆ ಈಗಾ 5 -20 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಕೆಲವು ಕಂಪನಿಗಳ ಬಿಯರ್ ಬೆಲೆ ಕಳೆದ ಗುರುವಾರದಿಂದ ಹೆಚ್ಚಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರ ಜಾರಿಗೆ ಬರಲಿದೆ. ಎಲ್ಲಾ ಬ್ರಾಂಡ್ ಗಳ ಬಿಯರ್ ಬೆಲೆಯು ಪ್ರತಿ ಬಾಟಲಿಗೆ ಕನಿಷ್ಠ 5 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗಲಿದೆ.
ಸರ್ಕಾರ ಬಿಯರ್ ಮೇಲಿನ ತೆರಿಗೆಯನ್ನು ಕಳೆದ ಜುಲೈ 1 ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿದೆ. ಪ್ರತಿ ಬಾಟಲ್ ಬಿಯರ್ ನ ದರ ಕನಿಷ್ಠ 10 ರೂಪಾಯಿ ಜಾಸ್ತಿಯಾಗಿತ್ತು. ನಂತರ ಬಿಯರ್ ಉತ್ಪಾದನಾ ಕಂಪನಿಗಳು ಕಚ್ಚಾ ಸಾಮಗ್ರಿ ಬೆಲೆಯ ಹೆಚ್ಚಳದ ಕಾರಣವನ್ನು ನೀಡಿ ಪ್ರತಿ ಬಿಯರ್ ಬಾಟಲ್ ಮೇಲೆ ಕನಿಷ್ಠ 5 ರಿಂದ 20 ರೂಪಾಯಿ ಹೆಚ್ಚಳಕ್ಕೆ ತೀರ್ಮಾನಿಸಿವೆ. ರಾಜ್ಯದಲ್ಲಿ ಹೆಚ್ಚಾಗಿ ಬಳಕೆಯಾಗುವ ಲೆಜೆಂಡ್, ನಾಕೌಟ್, ಆರ್ಸಿ ಸ್ಟ್ರಾಂಗ್, ಬುಲೆಟ್, ಪವರ್ ಕೂಲ್ ಸೇರಿ ಎಲ್ಲಾ ಬ್ರಾಂಡ್ ಗಳ ಬಿಯರ್ ದರ ಏರಿಕೆಯಾಗಲಿದೆ ಎನ್ನಲಾಗಿದೆ.
ಇತರೆ ವಿಷಯಗಳು:
ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್! ನೆರೆ ಪರಿಹಾರಕ್ಕೆ 777 ಕೋಟಿ ಹಣ ಬಿಡುಗಡೆ
ಈ ಜಿಲ್ಲೆಯ ಮಹಿಳೆಯರಿಗೆ ನಾಳೆಯೇ ಖಾತೆಗೆ ₹4,000 ಜಮಾ