ಎಲ್ಲಾ ನಿಯಮ ಪಾಲಿಸಿ ಅನುಮತಿಯನ್ನು ಪಡೆಯಲು ವಿಫಲವಾದಲ್ಲಿ, ಈಗಾಗಲೇ ಕಟ್ಟಿರುವ ಎರಡೂವರೆ ಲಕ್ಷವನ್ನು ವಾಪಸ್ ಕೊಡಲ್ಲ ಅನ್ನೋ ಹೊಸ ನಿಯಮವನ್ನು ರೂಪಿಸಿದೆ.
ಅನುದಾನಿತ ಶಾಲೆಗಳು ಹಾಗು ಖಾಸಗಿ ಶಾಲೆಗಳ ಮೇಲೆ ಸರ್ಕಾರದ ಕೆಂಗಣ್ಣು ಬಿದ್ದಿದೆ ಅಂತೆ. ಲೈಸೆನ್ಸ್ ನವೀಕರಣ ಸೇರಿದಂತೆ ಫೈರ್ ಸೇಫ್ಟಿ ಫೀಸ್ ಸಹ ದುಬಾರಿಯಾಗಿದೆ. ಇದು ಪೋಷಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚಾಗಿದೆ.
ಗ್ಯಾರಂಟಿಯ ಹೆಸರಿನಲ್ಲಿ ಬೆಲೆ ಹೆಚ್ಚಳ ಮಾಡುತ್ತಿರುವ ರಾಜ್ಯ ಸರ್ಕಾರವು ಇದೀಗ ಖಾಸಗಿಯ ಶಾಲೆಗಳ ಅನುಮತಿಯನ್ನು ಸೇರಿದಂತೆ ಪ್ರತಿ ವರುಷವು ಲೈಸೆನ್ಸ್ ನವೀಕರಣದ ಬೆಲೆ ಹೆಚ್ಚಳ ಮಾಡಿದೆ.
ಈ ಕಾರಣದಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಕೂಡ ಬೆಲೆ ಏರಿಕೆಯ ಬಿಸಿ ಎದುರಿಸುವಂತಾಗಿದೆ. ಈ ಕ್ರಮದಿಂದ ಪೋಷಕರಿಗೆ ಶಾಲಾ ಫೀಸ್ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ.
ಈ ಮೊದಲು ಶಾಲೆಯ ಫೈರ್ ಸೇಫ್ಟಿ ನವೀಕರಣ ಶುಲ್ಕ 1 ಸಾವಿರವಿತ್ತು. ಆದರೆ ಇದೀಗ ಆ ಶುಲ್ಕವನ್ನು ಬರೋಬ್ಬರಿ 25,500 ರೂಪಾಯಿಗಳಿಗೆ ಏರಿಕೆಯನ್ನು ಮಾಡಿದೆ. ಹೊಸ ಶಾಲೆ ಅನುಮತಿಗೆ 40 ರಿಂದ 80 ಸಾವಿರ ಇತ್ತು. ಆದರೆ ಈಗಾ ಲಕ್ಷ ದಾಟುತ್ತಿದೆ.
ಇದನ್ನೂ ಸಹ ಓದಿ: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ! ವೇತನದ ಅರ್ಧದಷ್ಟು ʻಪಿಂಚಣಿʼ ಸಿಗಲಿದೆ
ಎಲ್ಲಾ ನಿಯಮಗಳನ್ನು ಪಾಲಿಸಿ ಅನುಮತಿಯನ್ನು ಪಡೆಯಲು ವಿಫಲವಾದಲ್ಲಿ, ಈಗಾಗಲೇ ಕಟ್ಟಿರುವಂತಹ ಎರಡೂವರೆ ಲಕ್ಷವನ್ನು ವಾಪಸ್ ಕೊಡಲ್ಲ ಅನ್ನೋ ಹೊಸ ನಿಯಮವನ್ನು ರೂಪಿಸಿದೆ.
ರಾಜ್ಯದಲ್ಲಿ 18 ಸಾವಿರ ಖಾಸಗಿ ಶಾಲೆಗಳು, 6 ಸಾವಿರ ಅನುದಾನಿತ ಶಾಲೆಗಳಿವೆ. ಬೆಂಗಳೂರಿನಲ್ಲಿ 6 ಸಾವಿರಕ್ಕೂ ಅದಿಕ ಖಾಸಗಿ ಶಾಲೆಗಳಿವೆ. ಇದರಲ್ಲಿರುವಂತಹ ಜಾಗದಲ್ಲಿ ಬಜೆಟ್ ಖಾಸಗಿ ಶಾಲೆಗಳಿಗೆ ಫೈರ್ ಸೇಫ್ಟಿ ನಿಯಮದ ಪಾಲನೆಯು ಕಷ್ಟಸಾಧ್ಯ. ಇದೇ ಕಾನೂನುನನ್ನು ಮುಂದಿಟ್ಟುಕೊಂಡು ಶಾಲೆಗಳಿಂದ ಲಕ್ಷ ಲಕ್ಷ ಹಣಕ್ಕೆ ಬೇಡಿಕೆಯನ್ನು ಇಡುವಂತಹ ಸಾಧ್ಯತೆಯಿದೆ.
ಶಿಕ್ಷಣ ಇಲಾಖೆಯ ಹೊಸ ನಿಯಮ ಹಾಗೂ ವಿವಿಧ ಶುಲ್ಕಗಳ ದರವನ್ನು ಹೆಚ್ಚಳವನ್ನು ಮಾಡಿರುವುದು ಖಾಸಗಿ ಶಾಲೆಗಳಿಗೆ ನುಂಗಲಾರದ ತುತ್ತಾಗಿದೆ. CBSC ಶಾಲೆಗಳಿಗೆ 5 ವರ್ಷಕ್ಕೊಮ್ಮೆ ನವೀಕರಣ ಇದ್ರೆ, ರಾಜ್ಯ ಪಠ್ಯಕ್ರಮದ ಶಾಲೆಗಳು ಪ್ರತಿವರ್ಷ ನವೀಕರದ ಕಿರುಕುಳ ಎನ್ನಲಾಗುತ್ತಿದೆ.
ಇತರೆ ವಿಷಯಗಳು:
ಫ್ರೀ ಕರೆಂಟ್ ಇದ್ರೂ ಪ್ರತಿ ತಿಂಗಳು ವಿದ್ಯುತ್ ಬಿಲ್ ಬರ್ತಿದ್ಯಾ! ಸರ್ಕಾರದಿಂದ ಹೊಸ ರೂಲ್ಸ್
ಗ್ರಾಹಕರಿಗೆ ಬಿಗ್ ಶಾಕ್..! ಇನ್ಮುಂದೆ ಬ್ಯಾಂಕ್ ಹೂಡಿಕೆ ಬಂದ್