ಹಲೋ ಸ್ನೇಹಿತರೇ, ನೌಕರರ ವೇತನವನ್ನು 8000 ರೂ.ಗಳಷ್ಟು ಹೆಚ್ಚಿಸಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ.
ತುಟ್ಟಿಭತ್ಯೆ ಹೆಚ್ಚಳದ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅದಕ್ಕೂ ಮುನ್ನವೇ ಮತ್ತೊಂದು ಶುಭ ಸುದ್ದಿ ಸಿಗುತ್ತದೆ ಎನ್ನಲಾಗಿದೆ.
ದೇಶದ ಸುಮಾರು 50 ಲಕ್ಷ ಉದ್ಯೋಗಿಗಳಿಗೆ ಉಡುಗೊರೆ ನೀಡಲು ಹಣಕಾಸು ಇಲಾಖೆ ನಿರ್ಧರಿಸಿದೆ. ನೌಕರರ ವೇತನವನ್ನು 8000 ರೂ.ಗಳಷ್ಟು ಹೆಚ್ಚಿಸುವ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿದೆ. ಅಂದರೆ ಈಗ ಇರುವ 18000 ರೂ. ಮೂಲ ವೇತನವನ್ನು 26,000 ರೂ.ಗೆ ಹೆಚ್ಚಿಸುವ ಚಿಂತನೆ ನಡೆಸಿದೆ.
ಆದರೆ, ಮೂಲ ವೇತನ ಹೆಚ್ಚಳದ ಕುರಿತು ಸರ್ಕಾರ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಬಜೆಟ್ ನಲ್ಲಿ ಈ ಕುರಿತು ಅಧಿಸೂಚನೆ ಹೊರಬೀಳುವ ಸಾಧ್ಯತೆಗಳಿದೆ ಎನ್ನಲಾಗಿದೆ.
ಉದ್ಯೋಗಿಗಳ ವೇತನ ಹೆಚ್ಚಳವು ಫಿಟ್ಮೆಂಟ್ ಅಂಶವನ್ನು ಆಧರಿಸಿದೆ. ಫಿಟ್ಮೆಂಟ್ ಅಂಶವನ್ನು ಹೆಚ್ಚಿಸುವ ಮೂಲಕ ಮೂಲ ವೇತನವನ್ನು ಸಹ ಹೆಚ್ಚಿಸಲಾಗುತ್ತದೆ ಎಂದು ಹೇಳಲಾಗಿದೆ. ಸರ್ಕಾರಿ & ಕೇಂದ್ರ ಸರ್ಕಾರಿ ನೌಕರರ ಫಿಟ್ಮೆಂಟ್ ಅಂಶ ಹೆಚ್ಚಿಸಿದರೆ ಇನ್ ಹ್ಯಾಂಡ್ ಸ್ಯಾಲರಿ ಕೂಡಾ ಹೆಚ್ಚುತ್ತದೆ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಫಿಟ್ಮೆಂಟ್ ಅಂಶ ಶೇ.2.57ರಷ್ಟಿದೆ.ಇದರ ಆಧಾರದ ಮೇಲೆ ನೌಕರರಿಗೆ ವೇತನ ನೀಡಲಾಗುತ್ತದೆ.ಇದನ್ನು ಶೇ.3.68ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ.2.57 ಫಿಟ್ಮೆಂಟ್ ಅಂಶದ ಆಧಾರದ ಮೇಲೆ ನೌಕರರ ಕನಿಷ್ಠ ವೇತನ ರೂ.18,000. ಒಂದು ವೇಳೆ ಇದು 3.68ಕ್ಕೆ ಈರಿಕೆಯಾದರೆ ಕನಿಷ್ಠ ಮೂಲ ವೇತನವನ್ನು 26,000 ರೂಪಾಯಿಗೆ ಏರಿಸಲಾಗುವುದು.
ಫಿಟ್ ಮೆಂಟ್ ಫ್ಯಾಕ್ಟರ್ ಅನ್ನು 3.68 ಕ್ಕೆ ಹೆಚ್ಚಿಸಿದರೆ, ನೌಕರರ ಮೂಲ ವೇತನ 26,000 ರೂ.ಗೆ ಏರಿಕೆಯಾಗಲಿದೆ.ಪ್ರಸ್ತುತ, ಉದ್ಯೋಗಿಯ ಕನಿಷ್ಠ ವೇತನವು 18,000 ಆಗಿದ್ದರೆ, ಭತ್ಯೆಗಳನ್ನು ಹೊರತುಪಡಿಸಿ 2.57 ರ ಫಿಟ್ಮೆಂಟ್ ಅಂಶದ ಆಧಾರದ ಮೇಲೆ 46,260 ರೂಪಾಯಿ (18,000 X 2.57 = 46,260) ಪಡೆಯುತ್ತಾನೆ. ಫಿಟ್ಮೆಂಟ್ ಅಂಶವನ್ನು 3.68 ಕ್ಕೆ ಹೆಚ್ಚಿಸಿದರೆ ವೇತನವು 95,680 ರೂ.ಗೆ ಏರುತ್ತದೆ (26000X3.68 = 95,680).
ಇತರೆ ವಿಷಯಗಳು
ಭೂಮಿಗಿಳಿದ ಬಂಗಾರದ ಬೆಲೆ..! ಖರೀದಿದಾರರ ಮುಖದಲ್ಲಿ ಮಂದಹಾಸ
ಉಚಿತವಾಗಿ ₹15,000 ಹಣ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ!