rtgh

ಅರಿವು ಯೋಜನೆಯಡಿ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ!

Arivu Education Loan Scheme
Share

ಹಲೋ ಸ್ನೇಹಿತರೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರು ನಗರ ಕೇಂದ್ರೀಯ ವಿಭಾಗದಿಂದ 2023-24 ನೇ ಸಾಲಿಗೆ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿಯಲ್ಲಿ ನಿಗಮದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥಿಗಳು ಈ ಯೋಜನೆಯ ಅರ್ಜಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Arivu Education Loan Scheme

ಅರಿವು ವಿಧ್ಯಾಭ್ಯಾಸ ಯೋಜನೆಯಡಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಇ, ವಿಐಎ, ಸಿಇಟಿ/ ನೀಟ್ ಮೂಲಕ ಇಂಜಿನಿಯರಿಂಗ್, ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್ ಫಾರ್ಮಸಿ, ಎಂಬಿಬಿಎಸ್, ಬಿಡಿಎಸ್, ಆಯುಷ್, ಬ್ಯಾಚುಲರ್ ಆಫ್ ಆರ್ಚ್, ಅಕ್ರಿಕಲ್ಚರ್ ಸೈನ್ಸ್, ವೆಟರಿನರಿ, ಫಾರ್ಮಾ ಸೈನ್ಸ್, ಎಲ್‍ಎಲ್‍ಬಿ ಓದಲು ಆಯ್ಕೆಯಾದ ವಿದ್ಯಾರ್ಥಿಗಳಿಗೆ “ಅರಿವು” ಯೋಜನೆಯಡಿಯಲ್ಲಿ ಶೈಕ್ಷಣಿಕ ಸಾಲವನ್ನು ಪಡೆಯಲು ಆನ್‍ಲೈನ್‍ನಲ್ಲಿ ನಿಗಮದ ಜಾಲತಾಣದಲ್ಲಿ https://kmdconline.karnataka.gov.in/ ಅರ್ಜಿ ಆಗ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ಆಗಿರುತ್ತದೆ.

ಇದನ್ನು ಓದಿ: ಇಂದಿನಿಂದ ಬೈಕ್ ಟ್ಯಾಕ್ಸಿ ಓಡಿಸಿದ್ರೆ ಹುಷಾರ್! ರಾಜ್ಯ ಸರ್ಕಾರ ಆದೇಶ..!

ಅರ್ಜಿ ಸಲ್ಲಿಸಿದ ನಂತರದಲ್ಲಿ ಅನುಸರಿಸಬೇಕಾದ ವಿಧಾನಗಳು:

ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಕಂಪ್ಯೂಟರ್‍ನಲ್ಲಿ ಭರ್ತಿ ಮಾಡಿ. ಅರ್ಜಿ ಪ್ರಿಂಟ್ ಔಟ್ ಪಡೆದು ಕ್ಯೂಆರ್ ಕೋಡ್ ಹೊಂದಿದ ಅರ್ಜಿಯೊಂದಿಗೆ ಕೆಲವು ದಾಖಲಾತಿಗಳನ್ನು ಜೊತೆಗೆ ಸಲ್ಲಿಸಬೇಕು.

  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
  • ಎಸ್.ಎಸ್.ಎಲ್.ಸಿ,
  • ಪಿ.ಯು.ಸಿ,
  • ಅಂಕಪಟ್ಟಿ,
  • ಆಧಾರ್ ಕಾರ್ಡ್,
  • ಪೋಷಕರು ಮತ್ತು ಅರ್ಜಿದಾರರ ಫೋಟೋ-05,
  • ಸಿಇಟಿ ಹಾಲ್ ಟಿಕೆಟ್ ಪ್ರತಿ ಮತ್ತು ನೋಟರಿ ಮಾಡಿಸಿದ ಛಾಪಾ ಕಾಗದದಲ್ಲಿ ಇಂಡೆಮ್ನಿಟಿ ಬಾಂಡ್

ಈ ಎಲ್ಲಾ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತಿ ಬೆಂಗಳೂರು ನಗರ ಕೇಂದ್ರಿಯ ಜಿಲ್ಲೆ ಕೊಠಡಿ ಸಂಖ್ಯೆ ಎಫ್ ಎಫ್- 29/37, 1ನೇ ಮಹಡಿ, ಹಮೀದ್ μÁ ಕಾಂಪ್ಲೆಕ್ಸ್, ಹಲಸೂರು ಗೇಟ್ ಪೊಲೀಸ್ ಠಾಣೆ ಹತ್ತಿರ, ಕಬ್ಬನ್ ಪೇಟೆ ಮುಖ್ಯರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಸಲ್ಲಿಸಬೇಕು.

ಇತರೆ ವಿಷಯಗಳು:

ಮುಂದಿನ 4 ದಿನ ಧಾರಾಕಾರ ಮಳೆ! ಈ ಭಾಗದಲ್ಲಿ ‘ಆರೆಂಜ್‌ ಅಲರ್ಟ್’ ಘೋಷಣೆ

ರಾಜ್ಯ ಸರ್ಕಾರಿ ನೌಕರರಿಗೆ ಹೆಚ್ಚುವರಿಗಾಗಿ ‘ಕೆಜಿಐಡಿ ಬೋನಸ್’ ಘೋಷಣೆ!


Share

Leave a Reply

Your email address will not be published. Required fields are marked *