ಬೆಂಗಳೂರು: ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರವು ಕುಣಿಕೆಯನ್ನು ಹಾಕಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕಡಿತ, ಅಕ್ರಮ-ಸಕ್ರಮ ಯೋಜನೆಯು ರದ್ದು, ಬಿತ್ತನೆ ಬೀಜ ರಸಗೊಬ್ಬರದ ಬೆಲೆ ಏರಿಕೆ, ರೈತ ವಿದ್ಯಾನಿಧಿ ರದ್ದು, ಹನಿ ನೀರಾವರಿಯ ಸಬ್ಸಿಡಿ ಕಡಿತ, ಹಾಲು ಉತ್ಪಾದಕರಿಗೆ ಸಬ್ಸಿಡಿಯ ದೋಖಾ ಮಾಡಿರುವ ಸರ್ಕಾರ ಅನ್ನದಾತನಿಗೆ ಅನ್ಯಾಯವನ್ನು ಮಾಡಿದೆ.
ನಾಡಿನ ರೈತರ ಸಮುದಾಯಕ್ಕೆ ಅತಿ ಹೆಚ್ಚು ಅನ್ಯಾಯವೆಸಗಿದ ಸರ್ಕಾರವೆಂದರೆ ಅದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಸಿದ್ದರಾಯ್ಯನವರ ರೈತರ ವಿರೋಧಿ ನೀತಿಯಿಂದ ಈಗಾಗಲೇ 1000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈಗ ಬಿತ್ತನೆ ಬೀಜ & ರಸಗೊಬ್ಬರಗಳ ಬೆಲೆಯೇರಿಕೆಯ ಜೊತೆ ರೈತರ ಪಾಲಿನ ಸಬ್ಸಿಡಿಯ ಹಣಕ್ಕೂ ಕೂಡ ಕನ್ನವನ್ನು ಹಾಕಿದೆ ರೈತ ಹಂತಕ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದೆ..
ಇತರೆ ವಿಷಯಗಳು:
ಇಂದಿನಿಂದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ! ರೊಡಿಗಿಳಿದ್ರೆ ಸೀಜ್
ಅನ್ನದಾತರಿಗೆ ಸಿಹಿ ಸುದ್ದಿ: ಪಿಎಂ ಕಿಸಾನ್ ಹಣದಲ್ಲಿ ದಿಢೀರ್ ಜಿಗಿತ!