ಹಲೋ ಸ್ನೇಹಿತರೇ, ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಈ ಮಧ್ಯೆ ತರಕಾರಿಗಳ ಬೆಲೆಯಲ್ಲಿ ಹಾವು-ಏಣಿ ಆಟ ಶುರುವಾಗಿದೆ. ಟೊಮೆಟೊ ಒಂದು ವಾರದ ಹಿಂದೆ ಶತಕ ಭಾರಿಸಿತ್ತು. ಇದೀಗ ಕೊಂಚ ಕಡಿಮೆಯಾಗಿದೆ. ಈ ಮಧ್ಯೆ ಈರುಳ್ಳಿ ಬೆಲೆ ಏರಿಕರಯಾಗುತಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.
ಒಂದು ವಾರದ ಹಿಂದೆ ಟೊಮೆಟೊ ಬೆಲೆ ಶತಕ ಭಾರಿಸಿತ್ತು. ಇದೀಗ ಸ್ವಲ್ಪ ಬೆಲೆ ಕಡಿಮೆಯಾಗಿದೆ. ಆದರೆ ಟೊಮೆಟೊ ಬೆಲೆ ಮಧ್ಯೆ ಈರುಳ್ಳಿ ಬೆಲೆ ಸದ್ದಿಲ್ಲದೆ ಏರಿಕೆಯಾಗುತ್ತಿದೆ. ಟೊಮೆಟೊ ಜೊತೆ ಜೊತೆಗೆ ಈರುಳ್ಳಿಯ ಬೆಲೆ ಏರಿಕೆಯಾಗುತ್ತಿದ್ದು, ಒಂದು ಕೆಜಿ ಈರುಳ್ಳಿಯ ಬೆಲೆ ಕೆಆರ್ ಮಾರುಕಟ್ಟೆಯಲ್ಲಿ 55 ರೂ. ಆಗಿದೆ. ಹೊರಗಡೆ 60 ರೂ. ಇದೆ.
ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಬರುತ್ತಿಲ್ಲ, ಹೀಗಾಗಿ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ 100 ರ ಗಡಿ ದಾಟುವ ಸಾಧ್ಯತೆ ಇದೆ. ಅಲ್ಲದೇ. ರಾಜ್ಯಕ್ಕೆ ಮುಂಗಾರು ಅವಧಿಗೂ ಮುನ್ನ ಪ್ರವೇಶಿಸಿದ್ದರಿಂದ ಈರುಳ್ಳಿ ಬೆಳೆ ನಾಶವಾಗಿದೆ. ಹೀಗಾಗಿ ರಾಜ್ಯದ ಗೋಡೌನ್ನಲ್ಲಿ ಈರುಳ್ಳಿ ಕಡಿಮೆ ಸ್ಟಾಕ್ ಇದೆ. ಹೀಗಾಗಿ ನಾಸಿಕ್ನಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜನರು ಈರುಳ್ಳಿ ಸ್ಟಾಕ್ ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಾಪಾರಸ್ಥ ಮುಬಾರಕ್ ಹೇಳಿದರು.
ಬೆಲೆ ಏರಿಕೆಯಿಂದಾಗಿ ಬಡ ಜನರು ರೋಸಿಹೋಗಿದ್ದಾರೆ. ಜೀವನ ಮಾಡುವುದು ಕಷ್ಟ ಇದೆ. ಕಳೆದ ಕೆಲ ದಿನಗಳ ಹಿಂದೆ ಟೊಮೆಟೊ ಬೆಲೆ ಜಾಸ್ತಿಯಾಗಿತ್ತು. ಈ ವಾರ ಈರುಳ್ಳಿಯ ಬೆಲೆ ಜಾಸ್ತಿಯಾಗುತ್ತಿದೆ. ಬರುವ ಕಡಿಮೆ ಸಂಬಳದಲ್ಲಿ ಹೇಗೆ ಜೀವನ ನಡೆಸುವುದು. ತರಕಾರಿಯ ಬೆಲೆ ಕೇಳಿಯೇ ಭಯವಾಗುತ್ತಿದೆ ಎಂದು ಗ್ರಾಹಕರಾದ ಹೇಳಿದರು.
ಇದನ್ನೂ ಸಹ ಓದಿ : ರೈತರಿಗೆ ಸಿಗುತ್ತೆ 90% ಸಬ್ಸಿಡಿ! ಕೇಂದ್ರದಿಂದ ಬಂತು ಹೊಸ ಯೋಜನೆ
ತರಕಾರಿಗಳ ಬೆಲೆ:
ತರಕಾರಿ | ಹಿಂದಿನ ಬೆಲೆ (ರೂ.) | ಇಂದಿನ ಬೆಲೆ (ರೂ.) |
ನಾಟಿ ಬೀನ್ಸ್ | 120 | 180 |
ಟೊಮೆಟೊ | 100 | 80 |
ಬಿಳಿ ಬದನೆ | 100 | 100 |
ಮೆಣಸಿನಕಾಯಿ | 80 | 100 |
ನುಗ್ಗೆಕಾಯಿ (ಕೆಜಿಗೆ) | 240 | 240 |
ಗಜ್ಜರಿ | 80 | 85 |
ನವಿಲುಕೋಸು | 80 | 110 |
ಮೂಲಂಗಿ | 70 | 70 |
ಹೀರೆಕಾಯಿ | 80 | 85 |
ಆಲೂಗಡ್ಡೆ | 40 | 50 |
ಈರುಳ್ಳಿ | 54 | 60 |
ಕ್ಯಾಪ್ಸಿಕಂ | 60 | 108 |
ಹಾಗಲಕಾಯಿ | 60 | 80 |
ಕೊತ್ತಂಬರಿ ಸೊಪ್ಪು (ಕೆಜಿ) | 40 | 100 |
ಶುಂಠಿ | 160 | 198 |
ಬೆಳ್ಳುಳ್ಳಿ | 220 | 338 |
ಪಾಲಕ್ (ಕೆಜಿ) | 50 | 50 |
ಪುದಿನ (ಕೆಜಿ) | 130 | 130 |
ಒಟ್ಟಿನಲ್ಲಿ, ಮಳೆ ಕಾರಣದಿಂದಾಗಿ ದಿನದಿಂದ ದಿನಕ್ಕೆ ತರಕಾರಿಗಳ ಬೆಲೆ ಜಾಸ್ತಿಯಾಗುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾದರೆ ಟೊಮೆಟೊ ಹಾಗೂ ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.
ಇತರೆ ವಿಷಯಗಳು:
ಫ್ರೀ ಗ್ಯಾಸ್ ಕನೆಕ್ಷನ್ಗೆ ಮತ್ತೊಮ್ಮೆ ಅವಕಾಶ! ಅರ್ಜಿ ಸಲ್ಲಿಕೆ ಶುರು
ಸರ್ಕಾರದಿಂದ ಉಚಿತ ಮನೆ ಪಡೆಯಲು ಮತ್ತೆ ಅರ್ಜಿ ಸಲ್ಲಿಕೆ ಪ್ರಾರಂಭ..!
7ನೇ ವೇತನ ಆಯೋಗದಿಂದ ಮತ್ತೊಂದು ಹೊಸ ಸುದ್ದಿ..!