ಹಲೋ ಸ್ನೇಹಿತರೆ, ಕರ್ನಾಟಕ, ದೆಹಲಿ, ಚೆನ್ನೈ, ಮುಂಬೈ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಿಎನ್ಜಿ ಬಳಕೆ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಸಿಎನ್ಜಿ ಬಳಕೆದಾರರಿಗೆ ಕಹಿಸುದ್ದಿಯೊಂದು ಸಿಕ್ಕಿದೆ. ದೇಶದಾದ್ಯಂತ ಸಿಎನ್ಜಿ ಬೆಲೆ ಹೆಚ್ಚಾಗಿದ್ದು, ಆಟೋ ರಿಕ್ಷಾ, ಕಾರ್ ಸೇರಿದಂತೆ ವಿವಿಧ ವಾಹನಗಳಿಗೆ ಸಿಎನ್ಜಿ ಬಳಸುವ ಗ್ಯಾಸ್ ಬಳಕೆದಾರರಿಗೆ ಬೆಲೆ ಏರಿಕೆಯ ಟೆನ್ಷನ್ ಶುರುವಾಗಿದೆ.
ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಮೀರತ್, ಶಾಮ್ಲಿ, ಮುಜಾಫರ್ನಗರ ಮತ್ತು ರೇವಾರಿ ನಗರಗಳಲ್ಲಿ ಸಿಎನ್ಜಿ ಬೆಲೆ ಕೆಜಿಗೆ 1 ರೂಪಾಯಿ ಹೆಚ್ಚಾಗಿದೆ. ಶನಿವಾರ ಸಂಜೆ 6 ಗಂಟೆಯಿಂದ ಹೊಸ ದರಗಳು ಅನ್ವಯವಾಗಲಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ದರವನ್ನು ಹೆಚ್ಚಿಸಲು ನಿರ್ಧರಿಸಿದೆ.
ಹೊಸ ದರದ ವಿವರಗಳು ಹೀಗಿದೆ:
ಇದುವರೆಗೆ ರಾಜಧಾನಿ ದೆಹಲಿಯಲ್ಲಿ ಸಿಎನ್ಜಿ ಬೆಲೆ 74.09 ಇದೆ. ಆದರೆ ಇದೀಗ ಜೂನ್ 22 ರಿಂದ 75.09 ಕ್ಕೆ ಏರಿಕೆಯಾಗಲಿದೆ. ಇಲ್ಲಿಯವರೆಗೆ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್ನಲ್ಲಿ ಪ್ರತಿ ಕೆಜಿಗೆ 78.70 ರೂ. ಇದ್ದು, ಇನ್ಮುಂದೆ ಇದು 79.70 ರೂ.ಗೆ ಹೆಚ್ಚಳವಾಗಲಿದೆ.
ಗುರುಗ್ರಾಮದಲ್ಲಿ ಯಾವುದೇ CNG ಗ್ಯಾಸ್ ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಅತ್ತ ರೇವಾರಿಯಲ್ಲಿ ಹೊಸ ದರ ಪ್ರತಿ ಕೆಜಿಗೆ 78.70 ರಿಂದ 79.70 ಕ್ಕೆ ಏರಿಕೆಯಾಗಿದೆ.
ಇದನ್ನು ಓದಿ: ಸರ್ಕಾರದಿಂದ ಸಿಗುತ್ತೆ ₹15,000! ಪ್ರತಿಯೊಬ್ಬರು ಪಡೆಯಬಹುದು ಯೋಜನೆಯ ಲಾಭ
ಹಳೆಯ ದರ
- ಗುರುಗ್ರಾಮದಲ್ಲಿ CNG ಬೆಲೆ ಕೆಜಿಗೆ ₹80.12
- ಕಾನ್ಪುರದಲ್ಲಿ CNG ಪ್ರತಿ ಕೆಜಿಗೆ ₹81.92
- ಫತೇಪುರದಲ್ಲಿ CNG ಪ್ರತಿ ಕೆಜಿಗೆ ₹81.92
- ಬಂಡಾದಲ್ಲಿ CNG ಪ್ರತಿ ಕೆಜಿಗೆ ₹81.92
- ಚಿತ್ರಕೂಟದಲ್ಲಿ CNG ಪ್ರತಿ ಕೆಜಿಗೆ ₹81.92
- ಹಾಪುರದಲ್ಲಿ CNG ಕೆಜಿಗೆ ₹78.70
ಇತರೆ ವಿಷಯಗಳು:
17.9 ಲಕ್ಷ ರೈತರಿಗೆ ತಲಾ ₹ 3,000 ಖಾತೆಗೆ!
ರಾಜ್ಯದಲ್ಲಿ ಇನ್ನು 5 ದಿನ ಭಾರೀ ಮಳೆ! ಈ ಜಿಲ್ಲೆಗಳಿಗೆ IMD ಅಲರ್ಟ್