rtgh

ಕಪ್ಪು ಚಿನ್ನದ ಬೆಳೆಗಾರರಿಗೆ ಸಂತಸ.! ಬೆಲೆಯಲ್ಲಿ ದಿಡೀರ್‌ ಜಿಗಿತ KG 700 ರೂ.ವರೆಗೂ ಮಾರಾಟ

black pepper price hike
Share

ಹಲೋ ಸ್ನೇಹಿತರೇ, ಕಾಫಿ ಬೆಳೆಯಿಂದ ಬೆಳೆಗಾರರಿಗೆ ನಷ್ಟ ಉಂಟಾಗಿದ್ದರೂ, ಮಡಿಕೇರಿಯಲ್ಲಿ ಕಾಳುಮೆಣಸಿನ ಬೆಳೆಗಾರರಿಗೆ ಈ ಬಾರಿ ಬಂಪರ್ ಲಾಭ ಸಿಕ್ಕಿದೆ. ಕೆಜಿಗೆ 700 ರ ವರೆಗೂ ಮಾರಾಟವಾಗುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

black pepper price hike

ಹವಾಮಾನ ಬದಲಾವಣೆಯಿಂದ ವಿದೇಶಗಳಲ್ಲಿ ಕಾಳುಮೆಣಸಿನ ಉತ್ಪಾದನೆ ಕುಸಿದಿದ್ದು, ಭಾರತದ ಮೆಣಸಿಗೆ ಉತ್ತಮ ಬೆಲೆ ಸಿಗಲು ಕಾರಣವಾಗಿದೆ. ಮೆಣಸು ಸಂಗ್ರಹಿಸಿಟ್ಟಿರುವ ರೈತರಿಗೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಬೆಲೆ ಸಿಗುವ ನಿರೀಕ್ಷೆಯಿದೆ.

ಮಡಿಕೇರಿ: ಕಾಳುಮೆಣಸಿನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೃಷಿಕರಲ್ಲಿ ಸಂತಸ ಮೂಡಿಸಿದೆ. ಜೂನ್‌ ಆರಂಭದಿಂದ ಕಾಳುಮೆಣಸಿನ ದರ ಏರಿಕೆಯತ್ತ ಸಾಗಿದ್ದು, ಮುಂದಿನ ದಿನಗಳಲ್ಲಿಯೂ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.

ಕಳೆದ 6-7 ವರ್ಷಗಳಿಂದ 500 ರೂಗೂ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ಕಾಳು ಮೆಣಸು ಸದ್ಯ 700 ರೂ ವರೆಗೂ ಮಾರಾಟವಾಗುತ್ತಿದೆ. ಜೂನ್ ಆರಂಭದಿಂದಲೂ ಮೆಣಸಿಗೆ ಉತ್ತಮ ಬೆಲೆ ಸಿಗುತ್ತಿದ್ದು ಮೆಣಸು ಸಂಗ್ರಹಿಸಿಟ್ಟಿದ್ದ ಬೆಳೆಗಾರರಿಗೆ ಮುಂದಿನ ದಿನಗಳಲ್ಲಿ ಬಂಪರ್ ಬೆಲೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

2016-17ರ ಸಾಲಿನಲ್ಲಿ ಒಣಗಿದ ಕಾಳುಮೆಣಸಿಗೆ ಕೆ.ಜಿಗೆ 750 ರಿಂದ 800 ರೂ. ದಾಖಲೆ ಬೆಲೆಯಿತ್ತು. ಬಳಿಕ ಬೆಲೆ ಕುಸಿತ ಉಂಟಾಗಿತ್ತು. ಗುರುವಾರ ಮಡಿಕೇರಿಯಲ್ಲಿ ಕಾಳು ಮೆಣಸಿನ ಬೆಲೆ ಕೆ.ಜಿಗೆ 660 ರೂ.ನಷ್ಟಿದ್ದು, ಜೂನ್‌ ಆರಂಭದಲ್ಲಿ 700 ರೂ. ಬೆಲೆಯಿತ್ತು. ಕಳೆದ ಸಾಲಿನಲ್ಲಿ ಜಾಗತಿಕವಾಗಿ ಕಾಳು ಮೆಣಸಿನ ಉತ್ಪಾದನೆ ಕುಸಿದಿದ್ದು, ಭಾರತದ ಮೆಣಸಿಗೆ ಸದ್ಯ ಉತ್ತಮ ಬೆಲೆ ಸಿಗಲು ಕಾರಣವಾಗಿದೆ.

ಹೊರ ದೇಶಗಳಲ್ಲಿ ಉತ್ಪಾದನಾ ಮಟ್ಟ ಕುಸಿತ:

ಹವಾಮಾನ ಬದಲಾವಣೆಯಿಂದ ವಿಯೆಟ್ನಾಂ, ಇಂಡೋನೇಷಿಯಾ, ಮಲೇಷಿಯಾ ಮತ್ತು ಬ್ರೆಜಿಲ್‌ನಲ್ಲಿ ಕಾಳುಮೆಣಸು ಉತ್ಪಾದನೆ ಕುಸಿದಿದೆ. ಜಾಗತಿಕ ಪೂರೈಕೆಯ ಶೇ.40 ರಷ್ಟು ಕಾಳುಮೆಣಸು ಉತ್ಪಾದಿಸುತ್ತಿರುವ ವಿಯಟ್ನಾಂನಲ್ಲಿ ಭಾರೀ ಮಳೆಯಿಂದ ಕಳೆದ ಸಾಲಿನಲ್ಲಿ ನಿರೀಕ್ಷಿತ ಉತ್ಪಾದನೆ ಆಗಲಿಲ್ಲ.

ಬ್ರೆಜಿಲ್‌ನಲ್ಲಿಅಸಾಧಾರಣ ಉಷ್ಣ ಹವಾಮಾನದಿಂದ ಶೇ.15ರಷ್ಟು ಕುಸಿದಿದೆ ಎನ್ನಲಾಗಿದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ಕೋಕೋ, ತಾಳೆ ಎಣ್ಣೆ ಮತ್ತು ದುರಿಯನ್‌ ಬೆಳೆ ರೈತರಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಸದಾ ರೋಗಬಾಧೆಗೆ ತುತ್ತಾಗುವ ಕಾಳುಮೆಣಸು ಕೃಷಿಯನ್ನು ತ್ಯಜಿಸುತ್ತಿರುವುದೂ ಜಾಗತಿಕವಾಗಿ ಕಾಳುಮೆಣಸು ಉತ್ಪಾದನೆ ಕುಸಿಯಲು ಕಾರಣವಾಗಿದೆ.

ಜಿಲ್ಲೆಯ ಬೆಳೆಗಾರರಿಗೆ ಬಂಪರ್

ಕಳೆದ ಸಾಲಿನಲ್ಲಿ ಅಕಾಲಿಕ ಬೆಳೆಯಿಂದ ಕಾಫಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಇದೀಗ ಪೆಪ್ಪರ್ ಅವರನ್ನು ರಕ್ಷಿಸಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಕಾಳುಮೆಣಸನ್ನು ಸಂಗ್ರಹಿಸಿ ಇಟ್ಟವರಿಗೆ ಬಂಪರ್‌ ಲಾಟರಿ ಹೊಡೆದಂತೆ ಆಗಿದೆ. ಆದರೆ ಕಳೆದ ವರ್ಷ ಹೆಚ್ಚಾದ ಬಿಸಿಲಿನಿಂದ ಬಳ್ಳಿಗಳು ಒಣಗಿದ್ದು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿಯೂ ಉತ್ಪಾದನೆ ಕುಸಿತವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿಯೂ ಕಾಳುಮೆಣಸಿನ ಬೆಲೆ ಹೆಚ್ಚಾಗುವ ಸಾಧ್ಯತೆಯಿದ್ದು, ತೋಟಗಾರಿಕಾ ಇಲಾಖೆ ಮತ್ತು ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯಿಂದಲೂ ಕಾಳು ಮೆಣಸಿನ ಪುನಶ್ಚೇತನಕ್ಕೆ ಕ್ರಮ ವಹಿಸಲಾಗುತ್ತಿದೆ.

ಯಾವುದೆ ಕೊಳೆ ರೋಗ ಹರಡದಂತೆ ಎಚ್ಚರವನ್ನು ವಹಿಸಿ:

ವಿಯೆಟ್ನಾಂ ಸೇರಿದಂತೆ ವಿದೇಶಗಳಲ್ಲಿ ಕಾಳುಮೆಣಸು ಉತ್ಪಾದನೆ ಸಂಪೂರ್ಣ ಕುಸಿದಿದ್ದು ಉತ್ತಮ ಗುಣಮಟ್ಟ ಹೊಂದಿರುವ ಭಾರತದ ಕಾಳುಮೆಣಸಿಗೆ ಮುಂದಿನ ದಿನಗಳಲ್ಲಿಯೂ ಬೇಡಿಕೆ ಹೆಚ್ಚಾಗಲಿದೆ. ಈ ಬಾರಿ ಹೆಚ್ಚಿನ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮೆಣಸಿನ ಬಳ್ಳಿಗಳಿಗೆ ಕೊಳೆರೋಗ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಕಾಳುಮೆಣಸು ಬೆಳೆ ಪುನಶ್ಚೇತನಕ್ಕೆ ಕ್ರಮಕೈಗೊಳ್ಳುವುದರ ಜೊತೆಗೆ ರೋಗ ತಡೆಗೆ ಮುಂದಾಗಬೇಕೆಂದು ತೋಟಗಾರಿಕಾ ಇಲಾಖೆ ಸಲಹೆ ನೀಡಿದೆ.

ಇತರೆ ವಿಷಯಗಳು

ಗ್ರಾಹಕರಿಗೆ ಶಾಕ್‌ ! ಸಾಲಗಳ ಮೇಲಿನ ಬಡ್ಡಿ ಹೆಚ್ಚಳ

ರೈತರಿಗೆ ಭರ್ಜರಿ ಗುಡ್ ನ್ಯೂಸ್: ಧಾನ್ಯಗಳ ಬೆಂಬಲ ಬೆಲೆ ಏರಿಕೆ!


Share

Leave a Reply

Your email address will not be published. Required fields are marked *