ಹಲೋ ಸ್ನೇಹಿತರೇ, ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಲಿ ಸದ್ಯದಲ್ಲೇ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಪ್ರಕಟಿಸಲಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಇರುವವರಿಗೆ ಪೂರಕ ಪರೀಕ್ಷೆ ಬರೆಯಲು ಟೈಮ್ ಟೇಬಲ್ ನಿಗದಿಪಡಿಸಿ, ಇದೀಗ ಟೈಮ್ ಟೇಬಲ್ ಬಿಡುಗಡೆ ಮಾಡಲಾಗಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮುಗಿಸಲಾಗಿದೆ. ಈ ಪರೀಕ್ಷೆಯನ್ನು ಬರೆದಿರುವವರ ವಿದ್ಯಾರ್ಥಿಗಳು ಫಲಿತಾಂಶವನ್ನು ಇದೇ ಮಾರ್ಚ್ 30 ರಂದು ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಲಿ ಜಿಲ್ಲಾ ಮಟ್ಟದ ಆಯಾ ಜಿಲ್ಲಾ ಉಪನಿರ್ದೇಶಕರುಗಳಿಗೆ ನಿರ್ದೇಶನವನ್ನು ನೀಡಿದೆ. ಈ ಫಲಿತಾಂಶ ಪ್ರಕಟಿಸುವ ವೇಳೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ಅವಕಾಶವಾಗುವಂತೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜೊತೆಗೆ ಉಪನಿರ್ದೇಶಕರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಸುವ ಈ ಪರೀಕ್ಷೆಗೆ ಮಂಡಳಿಯು ಹಲವು ನಿರ್ದೇಶನವನ್ನು ನೀಡಿದೆ.
ಪ್ರಮುಖ ದಿನಾಂಕಗಳು
ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆ ದಿನಾಂಕ : 30-03-2024
ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಶುಲ್ಕ ಪಾವತಿಗೆ ಕೊನೆಯ ದಿನಾಂಕ : 20-04-2024
ಪ್ರಥಮ ಪಿಯುಸಿ ಪೂರಕ ಪರೀಕ್ಷೆ ದಿನಾಂಕ : 20-05-2024 ರಿಂದ 31-05-2024 ರೊಳಗೆ.
1st ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಬಿಡುಗಡೆ ದಿನಾಂಕ : 06-06-2024
ಪ್ರಥಮ ಪಿಯುಸಿ ಪೂರಕ ಪರೀಕ್ಷೆಯ ವಿಷಯವಾರು ದಿನಾಂಕಗಳು
- ಕನ್ನಡ, ಅರೇಬಿಕ್ : 20-05-2024,
- ಇತಿಹಾಸ ಅಥವಾ ಭೌತಶಾಸ್ತ್ರ : 21-05-2024,
- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ : 22-05-2024,
- ಇಂಗ್ಲಿಷ್ : 23-05-2024,
- ಗಣಿತ, ಶಿಕ್ಷಣಶಾಸ್ತ್ರ, ಭೂಗೋಳಶಾಸ್ತ್ರ, ಜೀವಶಾಸ್ತ್ರ : 24-05-2024,
- ಅರ್ಥಶಾಸ್ತ್ರ : 25-05-2024,
- ಭೂಗೋಳಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ, ಗೃಹ ವಿಜ್ಞಾನ : 27-05-2024,
- ಜೀವಶಾಸ್ತ್ರ, ಸಮಾಜಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ ಮತ್ತು ಗಣಕ ವಿಜ್ಞಾನ : 28-05-2024,
- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ : 29-05-2024,
- ಹಿಂದಿ : 30-05-2024,
- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್ : 31-05-2024,
- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಬ್ಯೂಟಿಮೊಬೈಲ್, ಬ್ಯೂಟಿ ಅಂಡ್ ವೆಲ್‌ನೆಸ್ : 31-05-2024
ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶ ಉತ್ತೀರ್ಣರಾಗದೇ ಇರುವವರು ಕಾಲೇಜುಗಳ ಸೂಚನಾ ಫಲಕದಲ್ಲಿ ಪೂರಕ ಪರೀಕ್ಷೆಯ ವಿವರಗಳನ್ನು ತಿಳಿದುಕೊಳ್ಳಬೇಕು ಅದರ ಪ್ರಕಾರ ಶುಲ್ಕ ಪಾವತಿಸಬೇಕು. ಇದಕ್ಕೆ ಸರಿಯಾದ ಮಾಹಿತಿಯನ್ನು ನೀಡುವಂತೆ ಜಿಲ್ಲಾ ಉಪನಿರ್ದೇಶಕರುಗಳಿಗೆ ಮಂಡಲಿ ಸೂಚನೆಯನ್ನು ಪ್ರಕಟಿಸಿದೆ.
ಇತರೆ ವಿಷಯಗಳು
ಸರ್ಕಾರದಿಂದ ‘ನಾರಿ ನ್ಯಾಯ’ ಘೋಷಣೆ! ಮಹಿಳೆಯರಿಗೆ 1 ಲಕ್ಷ ನೀಡುವ ಹೊಸ ಗ್ಯಾರಂಟಿ
ಪಡಿತರ ಚೀಟಿ ಪಡೆಯಲು ಪುನಃ ಅವಕಾಶ! ಇಲ್ಲಿಂದ ಅಪ್ಲೇ ಮಾಡಿ